ರಾಬಿನ್‌ ವೇಣು ಉತ್ತಪ್ಪ (ಜನನ: ನವೆಂಬರ್ ೧೧, ೧೯೮೫ ಕೊಡಗು, ಕರ್ನಾಟಕ ) ಭಾರತ ಕ್ರಿಕೆಟ್ ತಂಡದ ಆಟಗಾರ. ಇವರ ತಂದೆ ವೇಣು ಉತ್ತಪ್ಪ ಕೊಡಗಿನವರು ಮತ್ತು ತಾಯಿ ರೋಸೆಲಿನ್ ಕೇರಳದ ಕೋಯಿಕೋಡ್ ನವರು. ಇವರು ಎಪ್ರಿಲ್ ೨೦೦೬ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದರು. ಸರಣಿಯ ಏಳನೆಯ (ಕೊನೆಯ) ಪಂದ್ಯದಲ್ಲಿ ಆಡಿದ ಉತ್ತಪ್ಪ, ೮೬ ರನ್ನುಗಳನ್ನು ಬಾರಿಸಿ, ತಮ್ಮ ಮೊದಲನೇ ಪಂದ್ಯದಲ್ಲೆ ಭಾರತದ ಆಟಗಾರರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಇವರು ವೇಗದ ಬೌಲರ್ಗಳ ವಿರುದ್ಧ ಬ್ಯಾಟ್ಟಿಂಗ್ ಕ್ರೀಸ್ನಿಂದ ಹೊರಗೆ ನೆಡೆದು ಬಂದು ಬ್ಯಾಟ್ಟಿಂಗ್ ಮಾಡುವ ವಿಷಿಷ್ಟ ಶೈಲಿ ಅಳವಡಿಸಿಕೊಂಡಿರುವುದರಿಂದ, ಇವರನ್ನು 'ದಿ ವಾಕಿಂಗ್ ಅಸ್ಸಾಸಿನ್' ಎಂದು ಕರೆಯುತ್ತಾರೆ. == ಪ್ರತಿನಿಧಿಸಿದ ತಂಡಗಳು == ಭಾರತ ಕರ್ನಾಟಕ ಪ್ರಸ್ತುತ ರಾಯಲ್ ಚಾಲೆಂಜ್ಸ್ರ್(ಭಾರತೀಯ ಪ್ರಿಮಿಯರ್ ಲೀಗ್) ೨೦೦೮ ಮುಂಬಯಿ ಇಂಡಿಯನ್ಸ್(ಭಾರತೀಯ ಪ್ರಿಮಿಯರ್ ಲೀಗ್)